Daarideepa

Hitech Harvester Hub: ರಾಜ್ಯದ ರೈತರಿಗೆ ಸಿಗಲಿದೆ 40 ಲಕ್ಷ ರೂ. ಸಹಾಯಧನ!

0

ಹಲೋ ಸ್ನೇಹಿತರೇ….. ಕೃಷಿ ಇಲಾಖೆಯು ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾ ಕೇಂದ್ರಗಳು, ಕೃಷಿ ಸಲಕರಣೆ ಬ್ಯಾಂಕ್‌ಗಳಂತಹ ವ್ಯಕ್ತಿಗಳು, ಸಂಸ್ಥೆಗಳು ಮತ್ತು ರೈತರಿಗೆ ಬಾಡಿಗೆ ಆಧಾರದ ಮೇಲೆ ಕೃಷಿ ಉಪಕರಣಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲು ನೋಂದಾಯಿತ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Hitech Harvester Hub

ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50ರಂತೆ ಪ.ಜಾ/ಪ.ಪಂ ವರ್ಗದ ರೈತರಿಗೆ  ಗರಿಷ್ಠ ಶೇ.70 ರಂತೆ  ಹಾಗೂ ಸಂಘ-ಸಂಸ್ಥೆಗಳಿಗೆ (ಚಾಲ್ತಿಯಲ್ಲಿರುವ  ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾದಾರ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳ  ಬ್ಯಾಂಕ್  ಗಳನ್ನೊಳಗೊಂಡಂತೆ ಗರಿಷ್ಠ ಶೇ.70ರಂತೆ  ಸಹಾಯಧನ ನೀಡಲಾಗುವುದು.

ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಅನುಷ್ಟಾನ ಮಾಡಲು ಚಾಲ್ತಿಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳು, ಸೇವಾದಾರ ಸಂಸ್ಥೆಗಳು, ವೈಯಕ್ತಿಕ ಫಲಾನುಭವಿಗಳು ಹಾಗೂ ನೊಂದಾಯಿತ ಸಂಘ ಸಂಸ್ಥೆಗಳು ಎಫ್‌ಪಿಓ ಸಂಸ್ಥೆಗಳು ಯೋಜನೆಗೆ ಅರ್ಹರಾಗಿದ್ದು, ಆಸಕ್ತ ರೈತರು ಸಂಬಂಧಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸೆ.24 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ವಿವಿಧ  ಹಾರ್ವೆಸ್ಟರ್  ಹಬ್ ಗಳಿಗೆ ನಿಗಧಿಪಡಿಸಿದ  ಗರಿಷ್ಠ ಸಹಾಯಧನದ ಮೊತ್ತಕ್ಕೆ ಸೀಮಿತಗೊಳಿಸಿ ಸ್ಥಳೀಯವಾಗಿ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳನ್ನು  ದಾಸ್ತಾನೀಕರಿಸಲು ಪ್ರತಿ ಒಂದು ಹೈಟೆಕ್  ಹಾರ್ವೆಸ್ಟರ್  ಹಬ್ ಘಟಕಕ್ಕೆ ಗರಿಷ್ಠ ಮೊತ್ತ 1 ಕೋಟಿ ರೂ. ಮೀರದಂತೆ (ರೂ.5 ಲಕ್ಷ ಆಡಳಿತಾತ್ಮಕ ವೆಚ್ಚ ಒಳಗೊಂಡಂತೆ) ಸಹಾಯಧನವನ್ನು ನೀಡಲಾಗುವುದು. ಆಡಳಿತಾತ್ಮಕ ವೆಚ್ಚವನ್ನು ಒಂದು ಬಾರಿ ಮಾತ್ರ ನೀಡಲಾಗುವುದು.

ಸಹಕಾರ ಸಂಘಗಳ ನಿಬಂಧನೆಯಂತೆ ಕಂಪನಿ ಕಾಯ್ದೆಯಡಿ ನೊಂದಾಯಿಸಿದ ಸಂಘ-ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತವೆ. ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳ, ಕೃಷಿ ಯಂತ್ರೋಪಕರಣಗಳ ಬ್ಯಾಂಕ್, ರೈತ ಉತ್ಪಾದಕ ಸಂಸ್ಥೆಗಳು, ಇತರೆ ಸಂಘ-ಸಂಸ್ಥೆಗಳು ರಾಜ್ಯಾದ್ಯಂತ ಅರ್ಜಿಗಳನ್ನು ಸಲ್ಲಿಸಬಹುದು.

ಆರು ಅಥವಾ ಒಂಬತ್ತು ವರ್ಷಗಳ ಕಾಲ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ತಪಾಸಣೆಯಲ್ಲಿ ಸಂಪೂರ್ಣವಾಗಿ ಲೆಕ್ಕ-ಪತ್ರ ಹಾಗೂ ಯಂತ್ರೋಪಕರಣಗಳನ್ನು ಹಾಜರುಪಡಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ಸೇವಾದಾರ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬಹುಹುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.

ಇತರೆ ವಿಷಯಗಳು:

Prabandha : ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಗೆ ಭಾಗವಹಿಸಿ 31 ಸಾವಿರ ಹಣ ಗೆಲ್ಲಿರಿ

ಸಂತೂರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ; 24 ಸಾವಿರ ರೂ ಸ್ಕಾಲರ್‌ಶಿಪ್‌ ಪಡೆಯಿರಿ

Leave A Reply
rtgh