Daarideepa

BPL ಕಾರ್ಡ್‌ ಇದ್ದವರಿಗೆ ಇನ್ಮುಂದೆ ಅಕ್ಕಿ ಹಣದ ಬದಲು ಸಿಗುತ್ತೆ ದಿನಸಿ ಕಿಟ್‌!!

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕರ್ನಾಟಕ ಸರ್ಕಾರವು ‘ಅನ್ನಭಾಗ್ಯ ಯೋಜನೆ ಮೂಲಕ ಫಲಾನುಭವಿಗಳಿಗೆ ಸದ್ಯ 5 kg ಅಕ್ಕಿಯ ಬದಲಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದು, ಇನ್ನು ಮುಂದೆ ಸರ್ಕಾರವು ಹಣ ನೀಡುವುದನ್ನು ನಿಲ್ಲಿಸಲಿದೆ. ಯಾಕೆಂದರೆ ಇದರ ಬದಲಿಗೆ ಇನ್ನು ಮುಂದೆ ಸರ್ಕಾರವು ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಲಿದೆ.

Anna Bhagya

ಹೌದು, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗ ಪ್ರತಿಯೊಬ್ಬ ಫಲಾನುಭವಿಗೆ ಪ್ರತಿ ತಿಂಗಳು 10 kg ಅಕ್ಕಿಯನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದರೂ, ಕೇವಲ 5 kg ಅಕ್ಕಿಯನ್ನು ಮಾತ್ರವೇ ಪೂರೈಸಲು ಸಾಧ್ಯವಾಗಿದ್ದು, ಉಳಿದ 5 kg ಬದಲಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುತ್ತಿದೆ. ಆದರೆ ಇನ್ಮುಂದೆ ಆ ಅಕ್ಕಿಯ ಹಣವು ಜನರಿಗೆ ಸಿಗುವುದಿಲ್ಲ ಅದರ ಬದಲಿಗೆ ಪ್ರತಿನಿತ್ಯ ಬಳಕೆಗೆ ಬೇಕಾಗುವಂತಹ ದಿನಸಿ ಕಿಟ್ ಅನ್ನು ಸರ್ಕಾರವು ನೀಡಲಿದೆ. ಹಾಗಿದ್ರೆ ಆ ಕಿಟ್ ನಲ್ಲಿ ಏನೆಲ್ಲಾ ಇರಲಿದೆ?

Related Posts

ಕರ್ನಾಟಕದಲ್ಲಿ ಖಾಲಿ ಇರುವ 1 ಸಾವಿರ VA ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರವು ಕೊಡಲು ತೀರ್ಮಾನಿಸಿರುವ ದಿನಸಿ ಕಿಟ್ ನಲ್ಲಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ದಿನಸಿ ಕಿಟ್‌ನಲ್ಲಿ ಇರಲಿದೆ. ಇದರ ಕುರಿತು ಆಹಾರ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೊಳಿಸಲು ಸಿದ್ಧತೆಗಳು ನಡೆದಿದೆ.

udyoga | ಸರ್ಕಾರ ನೀಡುತ್ತಿದೆ 1.00 ಲಕ್ಷ ಜೊತೆ 33% ಸಬ್ಸಿಡಿ

National Thermal Power Corporation | NTPC ಯಲ್ಲಿ 200 ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿ

Leave A Reply
rtgh