Daarideepa

Actor : ನಟನೆಯಲ್ಲಿ ಆಸಕ್ತಿ ಹೊಂದಿದವರಿಗೆ ಭರ್ಜರಿ ಆಫರ್‌ ಕೊಟ್ಟ ‘ಪುಟ್ಟಕ್ಕನ ಮಕ್ಕಳು’ ತಂಡ

0

ಹಿರಿಯ ನಟಿ ಉಮಾಶ್ರೀ ಮತ್ತು ಮಂಜು ಭಾಷಿಣಿ ಮುಖ್ಯಭೂಮಿಕೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಯಾಶಸ್ವಿಯಾಗಿ ಸಾಗುತ್ತಿರುವ ಧಾರಾವಾಹಿ ಆಗಿದೆ, TRP ಪಟ್ಟಿಯಲ್ಲಿ ಕಳೆದ ಹಲವು ವಾರಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದೆ. ಒಬ್ಬ ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾ ಹಂದರವಿರುವಂತಹ, ಪುಟ್ಟಕ್ಕನ ಮಕ್ಕಳು ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ.

Actor

ಹೊಸತನದ ಜೊತೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವಂತಹ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಈಗಾ ಬಂಗಾರಮ್ಮನ ಬದಲು ಸಿಂಗಾರಮ್ಮನ ವರಸೆ ಜೋರಾಗಿದೆ. ಒಂದು ಕಡೆ ಕಂಠಿ-ಸ್ನೇಹ ಪುಟ್ಟಕ್ಕ ಮೂರು ಜನ ಜೊತೆಯಾಗಿದ್ದರೆ, ಅತ್ತ ಸಹನಾ ಹೊಸ ಬದುಕನ್ನು ಆರಂಭಿಸಿದ್ದಾಳೆ. ಹೀಗೆ ಇದೇ ರೀತಿ ವಿಭಿನ್ನವಾದ ಕಥೆಯಿಂದ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿರುವ ಈ ಧಾರಾವಾಹಿಯಲ್ಲಿ ನಟಿಸಲು ಆಸಕ್ತರಿಗೊಂದು ಸುವರ್ಣಾವಕಾಶವಿದೆ.

ಈ ಧಾರಾವಾಹಿಯಲ್ಲಿ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟಿಯೊಬ್ಬರು ಬೇಕಾಗಿದ್ದಾರೆ. ಇದರ ಬಗ್ಗೆ ಸ್ವತಃ ಧಾರಾವಾಹಿ ನಿರ್ದೇಶಕರಾದ ಆರೂರು ಜಗದೀಶ್‌ ಅವರು ತಿಳಿಸಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಲು ಮುಂದಾಗಿದ್ದಾರೆ.

ಈ ಧಾರಾವಾಹಿಯಲ್ಲಿ ಹೊಸ ಮುಖ್ಯವಾದ ಪಾತ್ರಕ್ಕೆ 23 ರಿಂದ 26 ವಯಸ್ಸಿನ ಒಳಗಿನ ಹಾಗೂ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುವ, ನಟನೆ ಗೊತ್ತಿರುವ, ಜೊತೆಗೆ ಗುಡ್ ಲುಕ್ ಇರುವಂತಹ ಹುಡುಗಿ ಬೇಕಾಗಿದ್ದಾರೆ.

Related Posts

IISc ನೇಮಕಾತಿ 2024: ಸೆಂಟರ್ ಹೆಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಾಗಾಗಿ ಯಾರಾದರು ಇದ್ದರೆ ದಯವಿಟ್ಟು ನಿಮ್ಮ ಪೋಟೊ ಹಾಗೂ ಬಯೊಡಾಟಾವನ್ನು ಶೀಘ್ರವಾಗಿ jsproductions.pm@gmail.com ಗೇ ಇ-ಮೇಲ್ ಮಾಡಿ ಎಂದು ತಿಳಿಸಿದ್ದಾರೆ.

ಇನ್ನು ನಟನೆಯಲ್ಲಿ ಆಸಕ್ತಿ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಈಗಾಗಲೇ ಇಂಟ್ರಸ್ಟಿಂಗ್‌ ಆಗಿದ್ದು, ಪ್ರಮುಖ ಹೊಸ ಪಾತ್ರ ಎಂದರೆ ಯಾವ ಪಾತ್ರ ಎಂಟ್ರಿ ಆಗಬಹುದು ಎನ್ನುವ ಕುತೂಹಲ ಈಗಾ ಮೂಡಿದೆ. ವೀಕ್ಷಕರು ತಮ್ಮ ದಿನನಿತ್ಯದ ಜೀವನದಲ್ಲಿ ಊಟ-ತಿಂಡಿ, ನಿದ್ರೆಯನ್ನು ಮಿಸ್‌ ಮಾಡಿಕೊಳ್ಳಬಹುದು ಆದರೆ ತಮ್ಮ ಮೆಚ್ಚಿನ ಧಾರವಾಹಿಯನ್ನಲ್ಲಾ ಎನ್ನುವ ಮಾತಿದೆ.

ಅಷ್ಟರ ಮಟ್ಟಿಗೆ ಕೆಲವರ ಜೀವನದಲ್ಲಿ ಧಾರವಾಹಿಗಳು ಹಾಸು ಹೊಕ್ಕಿರುತ್ತದೆ. ಮಧ್ಯಾಹ್ನ ಹಾಗೂ ಸಂಜೆ, ರಾತ್ರಿ ಪ್ರತಿ ದಿನವು ಪ್ರಸಾರವಾಗುವಂತಹ ಸೀರಿಯಲ್‌ ಅನ್ನು ವೀಕ್ಷಿಣೆ ಮಾಡಲು ಅಭಿಮಾನಿಗಳ ದೊಡ್ಡದಾದ ಬಳಗವೇಯಿದೆ. ಧಾರಾವಾಹಿಗಳು ವೀಕ್ಷಕರ ಬಳಗಕ್ಕೆ ವಯಸ್ಸಿನ ಮಿತಿಯಿಲ್ಲ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕ ಧಾರಾವಾಹಿಗಳನ್ನು ನೋಡುತ್ತಾರೆ. ಇಂತಹ ಧಾರಾವಾಹಿಯಲ್ಲಿ ನಟಿಸಲು ನಿಮಗೊಂದು ಸುವರ್ಣವಕಾಶವಿದ್ದು, ನಟನೆಯಲ್ಲಿ ಆಸಕ್ತಿಯನ್ನು ಹೊಂದಿರುವವರು ಕೂಡಲೇ ಸಂಪರ್ಕಿಸಬಹುದಾಗಿದೆ.

Police : 4000+ ಕರ್ನಾಟಕ ಪೋಲಿಸ್‌ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

PM Usha Scholarship 2024 | ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ನೇರ ₹20,000

Leave A Reply
rtgh