Daarideepa

agri tricks: ಉತ್ತಮ ಬಾಳೆ ಕೃಷಿ ವಿಧಾನ: ಎಕರೆಗೆ 3000 ಸಸಿ ನಾಟಿ ಮಾಡುವುದು ಹೇಗೆ??

0

ಹಲೋ ಸ್ನೇಹಿತರೇ, ಪ್ರತಿ ಯೊಬ್ಬ ರೈತರು ಕೂಡ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಾರೆ. ಹಾಗೇ ಕೆಲವರು ಬಾಳೆ ಕೃಷಿ ವಿಧಾನವನ್ನು ಮಾಡುತ್ತಾರೆ. ಈ ಕೃಷಿ ಮಾಡುವ ರೈತರಿಗೆ ಕಡಿಮೆ ಖರ್ಚಿನೊಂದಿಗೆ ಹೆಚ್ಚಿನ ಇಳುವರಿಯನ್ನು ಪಡೆದಕೊಳ್ಳಲು ಇದೀಗ ಹೊಸ ವಿಧಾನ ಒಂದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಈ ವಿಧಾನ ಯಾವುದು? ಈ ವಿಧಾನದ ಮೂಲಕ ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವ ಸಂಪೂರ್ಣವಾದ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ.

Banana Cultivation Method

ರೈತರೇ ನಾವು ಸಾಂಪ್ರದಾಯಿಕ ವಿಧನದಲ್ಲಿ ಬಾಳೆ ಬೇಸಾಯ ಮಾಡುತ್ತೇವೆ. ಆದ್ರೆ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಬಾಳೆ ಬೆಳೆದರೆ ನೀರು, ಗೊಬ್ಬರ ಉಳಿಸಿ ಖರ್ಚು ಕೂಡ ಕಡಿಮೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು. ಹೇಗಾಪ್ಪ ಅಂತ ಯೋಚನೆ ಮಾಡುತ್ತಿದ್ದೀರಾ.?? ಈ ಒಂದು ವಿಧನವನ್ನು ಅನುಸರಿಸಿದರೆ 2.500 ಯಿಂದ 3.000 ದವರೆಗೆ ಬಾಳೆ ಸಸಿಯನ್ನು ನೀವು ನಾಟಿ ಮಾಡಬಹುದು.

ಒಂದು ಹೊಂಡ ಏರಡು ಸಸಿ :

2×4 ಅಡಿಯ ಹೊಂಡವನ್ನು ನೀವು ಮಾಡಬೇಕು. ಅದರಲ್ಲಿ 2 ಬದಿಯಲ್ಲಿ ಒಂದೊಂದು ಸಸಿಯನ್ನು ನಾಟಿ ಮಾಡಬೇಕು.

ಪ್ರಯೋಜನಗಳು:

ಇವೆರಡು ಸಸಿಗಳಿಗೆ ಕೊಡುವ ಗೊಬ್ಬರ ಮತ್ತು ನೀರಿನ ಪ್ರಮಾಣದಲ್ಲಿ ಶೇಕಡ 20-25% ನೀವು ಉಳಿತಾಯವನ್ನು ಮಾಡಬಹುದು. ಹಾಗೂ ನೀವು ಏರಡು ಸಸಿಗಳಿಗೆ ನೀಡುವ ಆರೈಕೆಯನ್ನು ಒಂದೇ ಸಸಿಗೆ ಮಾಡಿದಂತೆ ಆಗುತ್ತದೆ.

ಒಂದು ಹೊಂಡ ಮೂರು ಸಸಿ :

ಈ ವಿಧನದಲ್ಲಿ 1 ಹೊಂಡದಲ್ಲಿ 3 ಮೂಲೆಗಳಲ್ಲಿ 3 ಸಸಿಗಳನ್ನು ನಾಟಿ ಮಾಡಲಾಗುತ್ತದೆ.

ಪ್ರಯೋಜನಗಳು:

ಇದಕ್ಕೆ ಹಾಕುವ ಗೊಬ್ಬರ ಹಾಗೇ ನೀರಿನ ಪ್ರಮಾಣದಲ್ಲಿ ನಾವು 30% ಉಳಿತಾಯವನ್ನು ಮಾಡಬಹುದಾಗಿದೆ. ಹಾಗಾಗಿ ಹೊಂಡ ಕಡಿಮೆ ಸಾಕಾಗುತ್ತದೆ ಮತ್ತು ಖರ್ಚು ಕೂಡ ಕಡಿಮೆ ಆಗುತ್ತದೆ. ಈ ಹೊಸ ವಿಧಾನವನ್ನು ಬಳಕೆ ಮಾಡುವುದರಿಂದ ಜಾಗ, ನೀರು ಖರ್ಚು, ಕೆಲಸ ಎಲ್ಲಾವು ಕಡಿಮೆಯೆ ಆಗುತ್ತದೆ.

Leave A Reply
rtgh