Trip : ಬೆಂಗಳೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು BMTC ಕಡೆಯಿಂದ ಹೊಸ ಟೂರ್ ಪ್ಯಾಕೇಜ್ ಬಿಡುಗಡೆ
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ದೇಶ ವಿದೇಶಗಳಿಗೆ ಬೇಟಿ ನೀಡಿದ್ದೇವೆ, ಆದರೆ ಬೆಂಗಳೂರಿನ ಪ್ರಸಿದ್ದ ಪ್ರವಾಸಿ ತಾಣಗಳನ್ನೆ ನಾವು ನೋಡಿಲ್ಲ ಎನ್ನುವವರಿಗೆ, BMTC ಗುಡ್ ನ್ಯೂಸ್ ಅನ್ನು ನೀಡಿದೆ. ಪ್ರತಿ ದಿನ ಬೆಂಗಳೂರಿನ ಪ್ರವಾಸಿ ತಾಣಗಳನ್ನು ತೋರಿಸುವಂತಹ ಕೆಲಸವನ್ನು BMTC ಮಾಡುತ್ತಿದೆ. ಇದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಹೌದು, BMTC ʼಬೆಂಗಳೂರು ದರ್ಶಿನಿʼ ಸಾರಿಗೆ ಸೇವೆಯ ಮೂಲಕ ಬೆಂಗಳೂರಿನ ಪ್ರಸಿದ್ದ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಅನುಕೂಲವಾಗಿದೆ. ಸುಮಾರು 12 ಪ್ರೇಕ್ಷಣೀಯ ಸ್ಥಳಗಳನ್ನು ನಿಮಗೆ ದರ್ಶಿನಿಯ ಮೂಲಕ ತೋರಿಸುವ ಕೆಲಸವನ್ನು ಇದು ಮಾಡುತ್ತಿದೆ. ಈ ಪ್ಯಾಕೇಜ್ ಪ್ರತಿ ದಿನ ಬೆಳಗ್ಗೆ 9:00 ಗಂಟೆಯಿಂದ ಪ್ರಾರಂಭವಾಗಿ, ಸಂಜೆ 7:00 ಕ್ಕೆ ಮುಕ್ತಾಯವಾಗಲಿದೆ.
ಈ ಪ್ಯಾಕೇಜ್ ನಲ್ಲಿ ಯಾವೇಲ್ಲ ಪ್ರವಾಸಿ ಸ್ಥಳಗಳು ಇರುತ್ತೆ?
ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು, ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಬೆಂಗಳೂರು ಅರಮನೆ, ಗವಿಗಂಗಾದರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಕರ್ನಾಟಕ ಸಿಲ್ಕ್ ಎಂಫೋರಿಯಂ, ವಸ್ತು ಸಂಗ್ರಹಾಲಯ, ಕರ್ನಾಟಕ ಚಿತ್ರಕಲಾ ಪರಿಷತ್ತು, ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ, ವೆಂಕಟಪ್ಪ ಆರ್ಟ್ ಗ್ಯಾಲರಿ, ಕಬ್ಬನ್ ಪಾರ್ಕ್ ಅನ್ನು ತೋರಿಸಿ ನಿಮ್ಮನ ಮೆಜೆಸ್ಟಿಕ್ ಗೆ ಬಿಡುತ್ತಾರೆ.
ಇನ್ನು ಟಿಕೆಟ್ ದರ ನೋಡೋದಾದ್ರೆ
ವಯಸ್ಕರಿಗೆ–₹400 (+GST)
ಮಕ್ಕಳಿಗೆ–₹300 (+GST)
ಇತರೆ ವಿಷಯಗಳು:
WCD Recruitment 2024 | ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಖಾಲಿ ಹುದ್ದೆಗಳ ಭರ್ತಿ
Metro | BMRCL ನಲ್ಲಿ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ