bara: 38 ಲಕ್ಷಕ್ಕೂ ಹೆಚ್ಚು ರೈತರ ಖಾತೆಗೆ ಬರ ಪರಿಹಾರ ಹಣ ಜಮಾ!
ರಾಜ್ಯದಲ್ಲಿ ಇದುವರೆಗೆ ಬರ ಪರಿಹಾರವಾಗಿ 4,047 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಅಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಸರ್ಕಾರ ಎಲ್ಲಾ ರೈತರಿಗೆ ಬರ ಪರಿಹಾರದ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆ ಆಗಿದೆ. ಆದರೂ ರಾಜ್ಯ ಸರ್ಕಾರ ಪರಿಹಾರವನ್ನು ನೀಡಿಲ್ಲ. ಬೆಳೆ ವಿಮೆ ಪರಿಹಾರ ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರ ಬಗ್ಗೆ ಸರ್ಕಾರವು ಕ್ರಮವನ್ನು ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ಬರ ಪರಿಹಾರವನ್ನು ನೀಡಬೇಕು ಒತ್ತಾಯಿಸಿದರು.
ನಮ್ಮ ಸರ್ಕಾರ 38,78,525 ರೈತರಿಗೆ ಬರ ಪರಿಹಾರ ಕೊಟ್ಟಿದೆ. 3,535.30 ಕೋಟಿ ರೂಪಾಯಿಗಳನ್ನ ಅರ್ಹ ರೈತಗೆ ಪರಿಹಾರ ನೀಡಲಾಗಿದೆ. ಡಿಜಿಟಲ್ ಸರ್ವೆ ಮೂಲಕ ಹಾನಿಯಾದ ರೈತರಿಗೆ ಪರಿಹಾರವನ್ನು ಕೊಡಲಾಗಿದೆ. ಶೇ.33 ಕ್ಕಿಂತ ಹೆಚ್ಚು ಬೆಳೆ ಹಾನಿಯಾದ ರೈತರಿಗೆ ಪರಿಹಾರವನ್ನು ನೀಡಲಾಗಿದೆ.
ಇದನ್ನೂ ಸಹ ಓದಿ: Part Time/Full Time | ಮನೆಯಲ್ಲೇ ಕುಳಿತು 60-70 ಸಾವಿರ ಗಳಿಸಿ
ನಾಲೆಯಲ್ಲಿ ನೀರನ್ನು ಹರಿಸಲು ಆಗದ ರೈತರಿಗೂ ಪರಿಹಾರವನ್ನು ಕೊಡಲಾಗಿದೆ. ಜೀವನೋಪಾಯಕ್ಕಾಗಿ 531 ಕೋಟಿ ರೂಪಾಯಿಗಳನ್ನ 17 ಲಕ್ಷ ರೈತರಿಗೆ ಪಾವತಿಯನ್ನು ಮಾಡ್ತಿದ್ದೇವೆ. 4,047 ಕೋಟಿ ರೂಪಾಯಿ ಒಟ್ಟು ಪರಿಹಾರವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಬರ ಪರಿಹಾರವನ್ನು ಬಿಡುಗಡೆಯನ್ನು ಮಾಡದೇ ಇದ್ದಾಗ 1,296 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರದಿಂದ ಮೊದಲೇ ಬರ ಪರಿಹಾರವನ್ನು ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಬರ ಪರಿಹಾರವನ್ನು ಕೊಟ್ಡಿರಲಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಹೋಗದೇ ಇದ್ದಿದ್ದರೇ ನಮಗೆ ಕೇಂದ್ರ ಪರಿಹಾರವನ್ನು ಕೊಡುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ನಿಂದ ನಾವು ಪರಿಹಾರವನ್ನು ಪಡೆದಿದ್ದೇವೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು.
ಬರ ಪರಿಹಾರ ಹಣ ಚೆಕ್ ಮಾಡುವುದ ಹೇಗೆ?
- ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ವರ್ಷ 2023-24ನ್ನು ಆಯ್ಕೆ ಮಾಡಿ
- ಋತುವಿನ ಆಯ್ಕೆಯಲ್ಲಿ ‘ಮುಂಗಾರು’ ಆಯ್ಕೆ ಮಾಡಿ
- ವಿಪತ್ತಿನ ಪ್ರಕಾರದಲ್ಲಿ ‘ಬರ ‘ ಎಂದು ಆಯ್ಕೆ ಮಾಡಿ
- ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ
- ನಿಮ್ಮ ತಾಲೂಕನ್ನು ಆಯ್ಕೆ ಮಾಡಿ
- ಹೋಬಳಿಯನ್ನು ಆಯ್ಕೆ ಮಾಡಿ
- ಗ್ರಾಮವನ್ನು ಆಯ್ಕೆ ಮಾಡಿ
ನಂತರ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಬರ ಪರಿಹಾರದ ಹಣ ಸಿಕ್ಕಿದೆ ಹಾಗೂ Sanction ಆಗಿದೆ ಎಂದು ಈ ರೀತಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Click Here To Check
ಇತರೆ ವಿಷಯಗಳು:
BPNL Recruitment 2024 | ಭಾರತೀಯ ಪಶುಪಾಲನಾ ನಿಗಮದಲ್ಲಿ 2200 ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿ
Dog : ನಿಮ್ಮನೆ ನಾಯಿ ಮಾತು ನಿಮಗೆ ಅರ್ಥ ಆಗ್ತಾ ಇಲ್ಲ ಅಂದ್ರೆ ಹೀಗೆ ಮಾಡಿ