Daarideepa

ವೀರಗಾಸೆ ಬಗ್ಗೆ ಪ್ರಬಂಧ | Essay on Veeragase in Kannada

0

ವೀರಗಾಸೆ ಬಗ್ಗೆ ಪ್ರಬಂಧ, Essay on Veeragase in Kannada Veeragase Information in Kannada Veeragase in Kannada Veergase Bagge Prabandha in Kannada

Essay on Veeragase in Kannada

ಈ ಕೆಳಗಿನ ಪ್ರಬಂಧದಲ್ಲಿ ಕರ್ನಾಟಕದಲ್ಲಿ ನೃತ್ಯ ಪ್ರಕಾರವಾದ ವೀರಗಾಸೆಯು ಒಂದಾಗಿದೆ. ಈ ನೃತ್ಯ ಪ್ರಕಾರದ ವಿಶೇಷ ಮಾಹಿತಿಯನ್ನು ಇಲ್ಲಿ ಸಂಪೂರ್ಣವಾಗಿ ನೀಡಲಾಗಿದೆ.

Essay on Veeragase in Kannada
Essay on Veeragase in Kannada

ವೀರಗಾಸೆ ಬಗ್ಗೆ ಪ್ರಬಂಧ

ಪೀಠಿಕೆ :

ಕರ್ನಾಟಕದ ಜಾನಪದ ನೃತ್ಯಗಳಲ್ಲಿ ವೀರಗಾಸೆಯೂ ಒಂದಾಗಿದೆ. ವೀರಗಾಸೆ ಹಾಗೂ ವೀರಭದ್ರನ ಕುಣಿತಕ್ಕೆ ಸಾಮ್ಯತೆ ಇದ್ದಷ್ಟೆ ವ್ಯತ್ಯಾಸವೂ ಇದೆ. ವೀರಗಾಸೆಯು ನೃತ್ಯ ಪ್ರಕಾರದ ಒಂದು ಉತ್ತಮ ಕಲೆಯಾಗಿದೆ.

 ನೃತ್ಯ ಪ್ರಕಾರದ ಮೂಲವು ಭಾರತದ ರಾಜ್ಯವಾದ ಕರ್ನಾಟಕದಿಂದ ಬಂದಿದೆ. ನೃತ್ಯ ಪ್ರದರ್ಶನವು ಹಿಂದೂ ಪುರಾಣದ ವಿಷಯವನ್ನು ಆಧರಿಸಿದೆ. ಇದನ್ನು ದಕ್ಷಿಣ ಭಾರತದಲ್ಲಿ ಉತ್ತಮ ಸಾಂಪ್ರದಾಯಿಕ ನೃತ್ಯ ಪ್ರಕಾರವಾಗಿದೆ. ವಿಶೇಷವಾಗಿ ದಸರಾ ಸಮಯದಲ್ಲಿ ಹಾಗೂ ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ನಡೆಸಲಾಗುತ್ತದೆ.

ವಿಷಯ ವಿವರಣೆ :

ದಕ್ಷಿಣ ಭಾರತಕ್ಕೆ ಸೇರಿದ ವೀರಗಾಸೆ ಎಂಬ ನೃತ್ಯ ಪ್ರಕಾರವನ್ನು ವಿವರಿಸಲು “ಅತ್ಯಂತ ಶಕ್ತಿಯುತ” ಸೂಕ್ತ ಮಾರ್ಗವಾಗಿದೆ. ಈ “ಅತ್ಯಂತ ತೀವ್ರವಾದ” ನೃತ್ಯ ಪ್ರಕಾರವನ್ನು ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಮುಖ್ಯವಾಗಿ “ಲಿಂಗಾಯತ” ಸಮುದಾಯದಿಂದ ಪ್ರದರ್ಶಿಸಲಾಗುತ್ತದೆ. ಈ ನೃತ್ಯ ಪ್ರಕಾರವನ್ನು ಸಾಮಾನ್ಯವಾಗಿ “ಶ್ರಾವಣ ಮತ್ತು ಕಾರ್ತಿಕೇಯ” ಹಿಂದೂ ತಿಂಗಳುಗಳಲ್ಲಿ ನಡೆಸಲಾಗುತ್ತದೆ. 

ಕೆಂಪು ಜುಬ್ಬ, ಎದೆಯ ಮೇಲೆ ವೀರಭದ್ರನ ಪ್ರತಿಮೆ, ಕಾಲಿಗೆ ಗೆಜ್ಜೆ, ಹಣೆಗೆ ವಿಭೂತಿ, ಸೊಂಟಕ್ಕೆ ಬಿಗಿದ ಬಿಳಿ ವಸ್ತ್ರ, ಪ್ರಧಾನವಾಗಿಸಿ ಕತ್ತಿ ಹಿಡಿದು ವೀರಭದ್ರನ ಕಥೆ ಹೇಳಿಕೊಂಡು ನೃತ್ಯ ಮಾಡುತ್ತಾರೆ. ಉತ್ತರ ಕರ್ನಾಟಕ ಕಡೆಗಳಲ್ಲಿ ಚೂಪಾದ ಆಯುಧದಿಂದ ದೇಹಕ್ಕೆ ಹೊಡೆದುಕೊಳ್ಳುತ್ತಾರೆ.

 ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲೆಗಳಲ್ಲಿ ವೀರಗಾಸೆ ಪ್ರಸಿದ್ಧ. ಗಿರಿಜಾ ಕಲ್ಯಾಣ, ಬಸವ ಪುರಾಣ, ದಕ್ಷ ಯಜ್ಞ ಕಥೆಗಳನ್ನು ನೃತ್ಯ, ತಮ್ಮಟೆ ವಾದ್ಯದೊಂದಿಗೆ ವಿವರಿಸುತ್ತಾರೆ. ಪತ್ನಿ ದಾಕ್ಷಾಯಿಣಿ ತಂದೆ ಬ್ರಹ್ಮನ ಯಾಗದಲ್ಲಿ ಪತಿ ಶಿವನ ಅವಮಾನ ಕೇಳಲಾರದೆ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗವನ್ನು ಮಾಡುತ್ತಾಳೆ. ಇದರಿಂದ ಕುಪಿತನಾಗಿ ನೊಂದ ಶಿವ ತಾಂಡವ ನೃತ್ಯ ಮಾಡುವುದನ್ನು ಕಥೆಯನ್ನು ವೀರಾವೇಷದಿಂದ ನೃತ್ಯ ಮಾಡುತ್ತಾ ಏರುಧ್ವನಿಯಲ್ಲಿ ಹೇಳಲಾಗುತ್ತದೆ.

ಸಾಮಾನ್ಯವಾಗಿ ವೀರಗಾಸೆ ನೃತ್ಯವನ್ನು ಜಾತ್ರೆ, ಉತ್ಸವ, ದಸರಾದಲ್ಲಿ ಆಯೋಜಿಸುತ್ತಾರೆ. ವೀರಭದ್ರನ ಮನೆದೇವರಾಗಿ ಆರಾಧಿಸುವವರು ಮದುವೆ ಹಾಗೂ ಇನ್ನಿತರ ಸಮಾರಂಭದಲ್ಲಿ ವೀರಗಾಸೆ ಕುಣಿತವನ್ನು ಆಯೋಜಿಸುತ್ತಾರೆ. ವಿಜಯನಗರದ ಕೆಲವು ಶಾಸನಗಳಲ್ಲಿ ವೀರಭದ್ರನ ಕೆತ್ತನೆ ಇದೆ. ವೀರಗಾಸೆ ಎಂದರೆ ವೀರ+ಕಾಸೆ ಕಾಲ ಕ್ರಮೇಣ ವೀರಕಾಸೆಯಾಗಿ ವೀರಗಾಸೆಯಾಗಿ ಬದಲಾಗಿದೆ.

ವೀರಶೈವ ಅಥವಾ ಲಿಂಗಾಯತ ಕುಲ/ಸಮುದಾಯದಿಂದ ಜಂಗಮ ಜನರು ಮಾತ್ರ ಪ್ರದರ್ಶಿಸಬೇಕು. ವೀರಗಾಸೆ ನೃತ್ಯ ರೂಪವನ್ನು ಪ್ರದರ್ಶಿಸುವಾಗ ಕೇವಲ ಸದಸ್ಯರ ಸಂಖ್ಯೆ ಮಾತ್ರ ಇರುತ್ತದೆ, ಅಂದರೆ 2, 4 ಅಥವಾ 6. ಮತ್ತು ಪ್ರದರ್ಶನದ ಸಂಗೀತಕ್ಕಾಗಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಲಾಗುತ್ತದೆ ಮತ್ತು ಪ್ರದರ್ಶನ ಮಾಡುವ ಜನರು ಆಚರಣೆಯಲ್ಲಿ ತಮ್ಮ ಬಾಯಿಯ ಮೂಲಕ ಸೂಜಿಯನ್ನು ಚುಚ್ಚಿಕಳ್ಳುತ್ತಾರೆ.

ವೀರಗಾಸೆಯ ವೇಷಭೂಷಣ ರೌದ್ರವಾಗಿಯೂ, ಕಲಾತ್ಮಕವಾಗಿಯೂ ಇರುತ್ತದೆ. ಗಾಢವರ್ಣದ ವೀರಗಾಸೆ ಕುಣಿಯುವವರನ್ನು ಜಂಗಮ ಅಥವಾ ಲಿಂಗದೇವರು ಎನ್ನುತ್ತಾರೆ. ಒಂದು ನೃತ್ಯದಲ್ಲಿ ಸಾಮಾನ್ಯವಾಗಿ ಎರಡರಿಂದ ಆರು ಮಂದಿ ಇರುತ್ತಾರೆ.

ಮುಖ್ಯ ನೃತ್ಯಗಾರ ನೇಮದಿಂದ ನಿಷ್ಠೆಯಿಂದ ಇರಬೇಕು. ಲಿಂಗಾಯತ ಅನುಸಾರ ಕಾಸೆ ಹಾಕಿ ಲಿಂಗವನ್ನು ಧರಿಸಿರಬೇಕು. ನೃತ್ಯ ಮಾಡುವಾಗ ಶಿವನ ಪುರಾಣದ ಕಥೆ ವಿವರಿಸುತ್ತಾರೆ. ಸಂಗಡಿಗರು ಲಯ ಬದ್ಧವಾಗಿ ಹೆಜ್ಜೆ ಹಾಕುತ್ತಾರೆ. ವೀರಗಾಸೆ ಶಿವನ ಕಥೆಗಳನ್ನು ಸಾರುತ್ತಾ ನಾಡಿನ ಪರಂಪರೆಯನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತದೆ.

ಉಪಸಂಹಾರ :

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವೀರಗಾಸೆ ನೃತ್ಯದ ಕಡೆ ಒಲವು ತೋರುತ್ತಿದ್ದಾರೆ. ವಿಲಾಸಕ್ಕೆ ಮಾತ್ರವಲ್ಲದೆ ವಿಕಾಸಕ್ಕೂ ಕಲೆ ಸಾಧನವಾಗಿದೆ. ಜನಸಾಮಾನ್ಯರ ಕಲೆಯ ರೂಪಾಂತರವಾಗಿ ಕರ್ನಾಟಕದ ಕಲಾಶ್ರೀಮಂತಿಗೆ ವೀರಗಾಸೆ ಸಾಕ್ಷಿಯಾಗಿದೆ.

FAQ :

1. ವೀರಗಾಸೆಯನ್ನು ಯಾವ ಜಂಗಮ ಜನರು ಮಾತ್ರ ಪ್ತದರ್ಶಿಸುತ್ತಾರೆ ?

ವೀರಶೈವ ಅಥವಾ ಲಿಂಗಾಯತ ಕುಲ/ಸಮುದಾಯದಿಂದ ಜಂಗಮ ಜನರು ಮಾತ್ರ ಪ್ರದರ್ಶಿಸಬೇಕು

2. ವೀರಗಾಸೆಯನ್ನು ಯಾವ ಸಂದರ್ಭದಲ್ಲಿಆಯೋಜಿಸಲಾಗುತ್ತದೆ.?

ವೀರಗಾಸೆ ನೃತ್ಯವನ್ನು ಜಾತ್ರೆ, ಉತ್ಸವ, ದಸರಾದಲ್ಲಿ ಆಯೋಜಿಸುತ್ತಾರೆ.

3. ವೀರಗಾಸೆ ಯಾವ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿದೆ ?

ಮೈಸೂರು, ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲೆಗಳಲ್ಲಿ ವೀರಗಾಸೆ ಪ್ರಸಿದ್ಧವಾಗಿದೆ.

4. ವೀರಗಾಸೆ ನೃತ್ಯದಲ್ಲಿ ಎಷ್ಟು ಜನರು ಇರುತ್ತಾರೆ ?

6 ಜನರು ಇರುತ್ತಾರೆ.

5.ವೀರಗಾಸೆ ನೃತ್ಯ ಮಾಡುವವರ ವೇಷ ಭೂಷಣ ಹೇಗಿರುತ್ತದೆ?

ಗಾಢವರ್ಣದ ಉಡುಪು, ಬಿಳಿ ಜಟೆ, ಕೊರಳಲ್ಲಿ ನಾಗಾಭರಣ , ಸೊಂಟದ ಪಟ್ಟಿ, ರುದ್ರಾಕ್ಷಿ, ವಿಭೂತಿ, ಕತ್ತಿ ಬೀಸುತ್ತಾ ನೃತ್ಯ ಮಾಡುತ್ತಾರೆ.

ಇತರೆ ವಿಷಯಗಳು :

ಕಂಪ್ಯೂಟರ್‌ ಬಗ್ಗೆ ಪ್ರಬಂಧ

ಮೊಬೈಲ್ ಬಗ್ಗೆ ಪ್ರಬಂಧ

ಪ್ರಾಣಿ ರಕ್ಷಣೆ ಕುರಿತು ಪ್ರಬಂಧ 

ಶಿಸ್ತಿನ ಮಹತ್ವದ ಬಗ್ಗೆ ಪ್ರಬಂಧ

Leave A Reply
rtgh