farm: ಅಡಿಕೆ ಸಿಪ್ಪೆಯನ್ನ 4 ತಿಂಗಳಲ್ಲಿ ಸಾರಯುತ ಗೊಬ್ಬರವಾಗಿ ಈ ರೀತಿ ಪರಿವರ್ತಿಸಿ
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕಸದಿಂದ ರಸವನ್ನು ಮಾಡಬಹುದು ಎನ್ನುವಂತಹ ಮಾತು ಎಲ್ಲರೂ ಕೇಳಿರುತ್ತಿರ. ಅದರಂತೆ ನಮ್ಮ ಜಮೀನು, ಗದ್ದೆ, ತೋಟಗಳಲ್ಲಿ ನಾವು ಬಿಸಾಡುವಂತಹ ಕೃಷಿ ತ್ಯಾಜ್ಯಗಳಿಂದಲೇ ಅತ್ಯುತ್ತಮವಾದ ಗೊಬ್ಬರವನ್ನು ತಯಾರಿಸಿಕೊಂಡು ಉತ್ತಮವಾದ ಬೆಳೆಯನ್ನು ಬೆಳೆಯಬಹುದು ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹಾಗೂ ಅನುಭವಿಯ ರೈತರ ಮಾತೂ ಕೂಡಾ.
ಅಡಿಕೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ಕರ್ನಾಟಕ ಇದೆ, ಉತ್ಪಾದನೆಯಾಗುವಂತಹ ಒಟ್ಟು ಅಡಿಕೆಯಲ್ಲಿ (14.5 ಲಕ್ಷ ಟನ್) ಶೇ 79ರಷ್ಟು ಅಡಿಕೆ ನಮ್ಮ ರಾಜ್ಯದ್ದೇ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆಯು ಅಧಿಕವಾದ ಆರ್ಥಿಕ ಲಾಭವನ್ನು ತಂದುಕೊಡುವ ಬೆಳೆಯಾಗಿರುವುದರಿಂದ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶಗಳಾದ ಮಲೆನಾಡು ಮತ್ತು ಕರಾವಳಿ ಭಾಗಗಳೊಂದಿಗೆ ಮಧ್ಯ ಹಾಗೂ ದಕ್ಷಿಣ ಕರ್ನಾಟಕದ ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ,ತುಮಕೂರು, ಹಾವೇರಿ ಜಿಲ್ಲೆಗಳಲ್ಲೂ ಅಡಿಕೆಯ ಬೆಳೆಯು ವ್ಯಾಪಕವಾಗಿದೆ.
ಪ್ರತಿ ಊರಿನಲ್ಲು ರಸ್ತೆಗಳ ಪಕ್ಕದಲ್ಲಿ ನೂರಾರು ಲೋಡು ಗಟ್ಟಲ್ಲೆ ಅಡಿಕೆ ಸಿಪ್ಪೆಗಳು ಬಿದ್ದಿರುತ್ತದೆ. ಕೆಲ ದಿನಗಳ ನಂತರ ಈ ಸಿಪ್ಪೆಗೆ ಬೆಂಕಿಯನ್ನು ಹಾಕಿದಾಗ ಒಂದೆರಡು ದಿನಗಳು ದಟ್ಟ ಹೊಗೆಯನ್ನು ಆವರಿಸುತ್ತದೆ. ಅಲ್ಲಿಗೆ ಸಿಪ್ಪೆಯ ಕಥೆಯೂ ಮುಗಿಯುತ್ತದೆ. ಮರು ವರ್ಷ ಮತ್ತೆ ಇದೇ ಪರಿಸ್ಥಿತಿ ನಡೆಯುತ್ತದೆ.
ರಸ್ತೆಯ ಪಕ್ಕ, ಜಮೀನುಗಳ ಮೂಲೆಗಳಲ್ಲಿ ಬಿಸಾಡುವ ‘ಸಿಪ್ಪೆ’ಗಳು ಬೆಳೆಗಾರರ ಪಾಲಿಗೆ ಇದು ತ್ಯಾಜ್ಯ. ಆದರೆ, ಇದನ್ನೇ ಬಳಸಿಕೊಂದಡು ಪೌಷ್ಟಿಕಾಂಶಯುಕ್ತವಾದ ಗೊಬ್ಬರವನ್ನು ತಯಾರಿಸಬಹುದು. ಇದು ಎಷ್ಟೋ ಜನರಿಗೆ ತಿಳಿದೆ ಇಲ್ಲ. ಇದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಇದನ್ನೂ ಸಹ ಓದಿ: IBPS Recruitment 2024 : IBPS 6128 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಸದಿಂದ ಅತೀ ವೇಗವಾಗಿ ಗೊಬ್ಬರ ತಯಾರಿಸುವ ವಿಧಾನ ಇಲ್ಲಿದೆ:
ಮೊದಲಿಗೆ 10 ಅಥಾವ 20 ಅಡಿ ಉದ್ದದ, 5 ಅಥಾವ 6 Feet ಅಗಲ ಇರುವಂತಹ ಒಂದು ಬೆಡ್ ಅನ್ನು ತಯಾರಿಸಿಕೊಳ್ಳಬೇಕು, ಅದಕ್ಕೆ ಎಲೆಗಳು, ಅಡಿಕೆ ಸಿಪ್ಪೆ, ತೆಂಗಿನ ಸಿಪ್ಪೆ ಅಂದರೆ ತ್ಯಾಜ್ಯಗಳನ್ನು ಇಲ್ಲಿ ಹಾಕ್ಬೇಕಾಗುತ್ತೆ. ಇದೆಲ್ಲ ಹಾಕಿದ ನಂತರ ಪ್ರತಿಯೋಂದು ಲೇಯರ್ ಮದ್ಯದಲ್ಲು ಕೂಡ ಸಗಣಿ, ಗಂಜಲ, ಸ್ವಲ್ಪ ಪ್ರಮಾಣದಲ್ಲಿ ಮಣ್ಣು ಹಾಗೂ ಎರೆಹುಳುಗಳನ್ನು ಹಾಕಬೇಕಾಗುತ್ತದೆ. ಹೀಗೆ ಮಾಡುವುದರಿಂದ ಎರೆಹುಳುಗಳಿಗೆ ಅತೀ ವೇಗವಾಗಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ.
ನೆಲದ ಮಟ್ಟದಿಂದ 3 ರಿಂದ 5 ಅಡಿ ಈ ಬೆಡ್ ಎತ್ತರ ಬರುತ್ತಿದ್ದಂತೆ ಇದನ್ನು ಪ್ಲಾಸ್ಟ್ಕ್ ಟರ್ಪಾಲ್ ಅಥಾವ ಕವರ್‌ಯಿಂದ ಇದನ್ನು ಗಾಳಿಯಾಡದೆ ಇರುವ ಹಾಗೆ ಮುಚ್ಚಬೇಕು. ಇದರಿಂದ ಹೀಟ್ ಜನರೇಟ್ ಅಗಿ ಮೈಕ್ರೋಬಿಯಲ್ ಪ್ರಕ್ರಿಯೆ ಹೆಚ್ಚಾಗುತ್ತದೆ. ಸೂರ್ಯನ ಕಿರಣಗಳಿಗೆ ಬಿಟ್ಟರೆ 3 ರಿಂದ 4 ವರ್ಷ ಗೊಬ್ಬರ ಆಗೋದಿಕ್ಕೆ ತೆಗೆದುಕೊಂಡರೆ, ಈ ಒಂದು ವಿಧಾನವನ್ನು ಅನುಸರಿಸಿದರೆ ನಾಲ್ಕೇ ತಿಂಗಳುಗಳಲ್ಲಿ ಗೊಬ್ಬರವನ್ನು ತಯಾರಿಸಬಹುದು.
ಇತರೆ ವಿಷಯಗಳು:
Reels | BBMP ಬಂಪರ್ ಆಫರ್..! ರೀಲ್ಸ್ ಮಾಡಿ ಹಣ ಗೆಲ್ಲಿ
Security Force Recruitment 2024 |160 ಸಬ್ ಇನ್‌ಸ್ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ