Daarideepa

police : ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪೋಲಿಸ್ ಟ್ರ್ಯಾಕಿಂಗ್‌ ವ್ಯವಸ್ಥೆ ಜಾರಿ‌

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಪೋಲಿಸ್‌ ವಿಭಾಗದಲ್ಲಿ ಸಾರ್ವಜನಿಕರು 112 ಗೆ ಕರೆಮಾಡಿದಾಗ ಮೊದಲು ಹೊಯ್ಸಳ ಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್‌ಎಸ್ ಸಂಖ್ಯೆಯ ಸಂದೇಶ ಮಾತ್ರ ರವಾನೆ ಆಗುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಹೊಸ ಟ್ರ್ಯಾಕಿಂಗ್‌ ವ್ಯವಸ್ಥೆ ಹಾಗೂ ಹೊಸ ಆ್ಯಪ್‌ ಜಾರಿಮಾಡಲಾಗಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

New Police Tracking System

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್‌ ವಿಭಾಗದಲ್ಲಿ ಆಪತ್ಬಾಂಧವ (ಸೇಫ್‌ ಕನೆಕ್ಟ್‌) ಮತ್ತು ಹೊಯ್ಸಳ ಟ್ರ್ಯಾಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಈ ಮೊದಲು ಸಾರ್ವಜನಿಕರು 112ಗೆ ಕರೆ ಮಾಡಿದಾಗ ಹೊಯ್ಸಳ ಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್‌ಎಸ್‌ ಸಂಖ್ಯೆಯ ಸಂದೇಶ ಹೋಗುತ್ತಿತ್ತು. ಇದೀಗ ಅದನ್ನು ಅಪ್‌ಗ್ರೇಡ್‌ ಮಾಡಿದ್ದು, ಕರೆ ಮಾಡಿದ ಸಾರ್ವಜನಿಕರಿಗೆ ಹೊಯ್ಸಳದ ಲೈವ್‌ ಲೊಕೇಶನ್‌ ಲಿಂಕ್‌ ಕಳುಹಿಸಲಾಗುತ್ತದೆ.

ಆದ್ದರಿಂದ ಹೊಯ್ಸಳ ವಾಹನ ಸಂಚರಿಸುವ ಮಾರ್ಗ, ಅದು ಎಷ್ಟು ದೂರದಲ್ಲಿದೆ, ಸ್ಥಳಕ್ಕೆ ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿಯಬಹುದಾಗಿದೆ. ಓಲಾ, ಊಬರ್‌ ಅಥವಾ ಫುಡ್‌ ಡೆಲಿವರಿ ಆ್ಯಪ್‌ಗಳ ಮಾದರಿಯಲ್ಲಿ ಸಮಯವನ್ನು ಟ್ರ್ಯಾಕಿಂಗ್‌ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

50 ಕಡೆ ಸುರಕ್ಷಿತ ತಾಣ:

‘ಸೇಫ್ ಸಿಟಿ’ ಯೋಜನೆ ಅಡಿ ನಗರದ 50 ಸ್ಥಳಗಳಲ್ಲಿ ಸುರಕ್ಷಿತ ತಾಣಗಳನ್ನು ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

BHEL : ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Co-operative Bank Recruitment 2024 | 200ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿ

Leave A Reply
rtgh