PM Electric Vehicle ಯೋಜನೆ…!
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಮೊದಲ ವರ್ಷದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೇಲೆ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ನೀವು ಈ ಯೋಜನೆಯ ಬಗೆಗಿನ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆ
ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವವರಿಗೆ ಮೊದಲ ವರ್ಷದಲ್ಲಿ 10,000 ರೂ.ವರೆಗೆ ಸಬ್ಸಿಡಿ ಸಿಗಲಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಯಾವ ರೀತಿಯಾಗಿ ಸಬ್ಸಿಡಿಯನ್ನು ನೀಡಲಾಗುತ್ತದೆ?
ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೇಲೆ ಸಬ್ಸಿಡಿ
ಮೊದಲ ವರ್ಷದಲ್ಲಿ ಒಟ್ಟು ಸಬ್ಸಿಡಿ ರೂ 10,000 ಕ್ಕಿಂತ ಹೆಚ್ಚಿರುವುದಿಲ್ಲ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ಪ್ರತಿ ಕಿಲೋವ್ಯಾಟ್ ಗೆ ಗಂಟೆಗೆ 5,000 ರೂ.ಗಳನ್ನು ನೀಡಲಾಗುತ್ತದೆ.
ಎರಡನೇ ವರ್ಷದಲ್ಲಿ ಸಬ್ಸಿಡಿ ಪ್ರತಿ ಕಿಲೋವ್ಯಾಟ್ ಗಂಟೆಗೆ 2,500 ರೂ.ಗಳನ್ನು ನೀಡಲಾಗುತ್ತದೆ. ಈ ವರ್ಷದ ಒಟ್ಟು ಸಬ್ಸಿಡಿ 5,000 ರೂ.ಗೆ ಮಾತ್ರ ಸೀಮಿತವಾಗಿರುತ್ತದೆ.
ಎಲೆಕ್ಟ್ರಿಕ್ ತ್ರಿಚಕ್ರ ವಾಹನದ ಮೇಲೆ ಸಬ್ಸಿಡಿ
ಮೊದಲ ವರ್ಷದಲ್ಲಿ ಇ-ರಿಕ್ಷಾ ಖರೀದಿಗೆ ರೂ.25,000 ಸಬ್ಸಿಡಿ ನೀಡಲಾಗುತ್ತದೆ.
ಎರಡನೇ ವರ್ಷದಲ್ಲಿ ಸಬ್ಸಿಡಿ 12,500 ರೂ.ಗಳನ್ನು ನೀಡಲಾಗುತ್ತದೆ.
ಇತರೆ ವಾಹನಗಳ ಮೇಲೆ ಸಬ್ಸಿಡಿ
L5 ವರ್ಗದ ತ್ರಿಚಕ್ರ ವಾಹನಗಳಿಗೆ ಮೊದಲ ವರ್ಷದಲ್ಲಿ 50,000 ರೂ. ನೀಡಲಾಗುತ್ತದೆ ಮತ್ತು ಎರಡನೇ ವರ್ಷದಲ್ಲಿ 25,000 ರೂ.ಗಳನ್ನು ನೀಡಲಾಗುತ್ತದೆ.
ಇ-ಆಂಬುಲೆನ್ಸ್
ಪಿಎಂ ಇ-ಡ್ರೈವ್ ಯೋಜನೆಯಡಿ ಇ-ಆಂಬುಲೆನ್ಸ್‌ಗಾಗಿ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದರ ಕಾರ್ಯಕ್ಷಮತೆ ಮತ್ತು ಸುರಕ್ಷತಾ ಮಾನದಂಡಗಳನ್ನು ಆರೋಗ್ಯ ಸಚಿವಾಲಯ, ರಸ್ತೆ ಸಾರಿಗೆ ಸಚಿವಾಲಯ ಮತ್ತು ಇತರ ಸಂಬಂಧಿತ ಅಧಿಕಾರಿಗಳ ಸಹಯೋಗದೊಂದಿಗೆ ಸಿದ್ಧಪಡಿಸಲಾಗುತ್ತದೆ. ಈ ಯೋಜನೆಯು ಎಲೆಕ್ಟ್ರಿಕ್ ವಾಹನಗಳ ಖರೀದಿಸಲು ಜನರಿಗೆ ಸಹಾಯ ಮಾಡುತ್ತದೆ.
ಸಬ್ಸಿಡಿ ಪಡೆಯುವುದು ಹೇಗೆ?
- ಮೊದಲು ಇ-ವೋಚರ್ ಪಡೆಯಲು PM ಇ-ಡ್ರೈವ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆಧಾರ್ ದೃಢೀಕೃತ ಇ-ವೋಚರ್ ಪಡೆಯಿರಿ.
- ಇ-ವೋಚರ್ ಗೆ ಖರೀದಿದಾರ ಮತ್ತು ಡೀಲರ್ ಇಬ್ಬರೂ ಸಹಿ ಮಾಡಬೇಕು.
- ನಂತರ ಸಹಿ ಮಾಡಿದ ಇ-ವೋಚರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
- ಸಬ್ಸಿಡಿಗಾಗಿ ನೀವು ನಿಮ್ಮ ‘ಸೆಲ್ಫಿ’ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
Apply Link
ಇತರೆ ವಿಷಯಗಳು
Gramina ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವಿವಿಧ ಖಾಲಿ ಹುದ್ದೆಗಳ ಭರ್ತಿ
BPL ಕಾರ್ಡ್ ಇದ್ದವರಿಗೆ ಇನ್ಮುಂದೆ ಅಕ್ಕಿ ಹಣದ ಬದಲು ಸಿಗುತ್ತೆ ದಿನಸಿ ಕಿಟ್!!