Daarideepa

 RTC | ಇನ್ಮುಂದೆ ಸುಲಭವಾಗಿ ನಿಮ್ಮ ಮೊಬೈಲ್‌ ನಲ್ಲೆ ನೋಡಿ ಪಹಣಿ, ಆರ್‌ಟಿಸಿ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಿಮಗೆ ನಿಮ್ಮ ಹೋಲದ ಪಹಣಿ ಪಡೆಯಬೇಕಿದೀಯ, ಹಾಗಿದ್ರೆ ಈಗ ಇದು ತುಂಬ ಸುಲಭ, ಮೊದಲಿನ ಹಾಗೆ ನಾಡ ಕಚೇರಿಗೆ ಹೋಗಿ ಕ್ಯೂನಲ್ಲಿ ನಿಲ್ಲುವಂತ ಅಗತ್ಯವಿಲ್ಲ. ನಿಮ್ಮ ಮೊಬೈಲ್‌ ನಲ್ಲಿಯೆ ಆನ್‌ಲೈನ್‌ ಮೂಲಕ ಸುಲಭವಾಗಿ ಹೊಲದ RTC ಅನ್ನು ಉತಾರ/ ಪಹಣಿಯನ್ನು ನೀವು ಪಡೆದುಕೊಳ್ಳಬಹುದು. ಹಾಗೆಯೇ ಪಹಣಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸಹ ಅವಕಾಶವಿದೆ.

RTC

ಸದ್ಯ ತಂತ್ರಜ್ಞಾನವು ಬಹುತೇಕವಾಗಿ ಎಲ್ಲ ಕೆಲಸಗಳನ್ನು ಸರಳಗೊಳಿಸಿದೆ. ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದು, ಆನ್‌ಲೈನ್‌ ಮೂಲಕವಾಗಿ ಯಾವಾಗ ಬೇಕಾದರೂ ಸಹ ಪಹಣಿಯನ್ನು ಪಡೆಯಬಹುದಾಗಿದೆ.

ಪಹಣಿ ಪಡೆಯಲು ಅಗತ್ಯ ದಾಖಲೆಗಳು:

  • ಹೋಲದ ಸರ್ವೇ ನಂಬರ್
  • ಹಿಸ್ಸಾ, ಯಾವ ಜಿಲ್ಲೆ
  • ಯಾವ ತಾಲೂಕ್
  • ಯಾವ ಹೋಬಳಿ ಇವುಗಳ ಮಾಹಿತಿ ನೀಡಬೇಕಿರುತ್ತದೆ.

ಇದನ್ನೂ ಸಹ ಓದಿ: Kannada Education App: ಬುಕ್ಸ್‌, ನೋಟ್ಸ್‌ ಎಲ್ಲಾ ಸಿಗುತ್ತೆ, ಅದು ಫ್ರೀಯಾಗಿ!!

ಹಾಗಾದರೇ ಆನ್‌ಲೈನ್‌ನಲ್ಲಿ ಪಹಣಿ ಪಡೆಯುವುದು ಹೇಗೆ?

  • ಮೊದಲು ಇಲ್ಲಿ ಕ್ಲಿಕ್‌ ಮಾಡಿ ವೆಬ್‌ಸೈಟ್‌ ತೆರೆಯಿರಿ.
  • ನಂತರ ಅಲ್ಲಿ ಕೇಳಲಾಗಿರುವ, ಹೋಲ ಇರುವ ಜಿಲ್ಲೆ , ತಾಲೂಕು , ಹೋಬಳಿ, ಗ್ರಾಮ, ಸರ್ವೇ ನಂಬರ್ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
  • ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ Fetch Details ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • Fetch Details ಆಯ್ಕೆ ಕ್ಲಿಕ್ ಮಾಡಿದ ಮೇಲೆ ನೀವು ನಮೂದಿಸಿದ ಜಾಗದ/ಭೂಮಿಯ ಮಾಹಿತಿಯನ್ನಾಧರಿಸಿ ಆ ಸರ್ವೇ ನಂಬರ್‌ನಲ್ಲಿರುವ ಭೂಮಿಯ ವಿವರಗಳು ನಿಮಗೆ ಕಾಣುತ್ತವೆ.
  • ಭೂಮಿಯ ವಿವರಗಳು ಕಾಣಿಸಿಕೊಂಡ ನಂತರ View ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  • View ಆಯ್ಕೆ ಕ್ಲಿಕ್ ಮಾಡಿದ ನಂತರ ಬೇರೊಂದು ಪುಟದಲ್ಲಿ ನಿಮ್ಮ ಪಹಣಿ ಕಾಣುತ್ತದೆ. ನೀವು ಅಲ್ಲಿ ಕಾಣುವ ಪಹಣಿಯನ್ನು ಸೇವ್‌ ಮಾಡಿಕೊಂಡು ಪ್ರಿಂಟ್‌ ತೆಗೆಸಿಕೊಳ್ಳಬಹುದು.
  • ಆನ್‌ಲೈನ್‌ನಲ್ಲಿ ವೀಕ್ಷಿಸುವ ಪಹಣಿ ವೀಕ್ಷಣೆಗೆ ಮಾತ್ರ. ಆದರೆ ನಿಗದಿತ ಸರ್ಕಾರಿ ಶುಲ್ಕ ಪಾವತಿಸುವ ಮೂಲಕ ಕೆಲಸಗಳಿಗೆ ಮಾನ್ಯತೆ ಇರುವಂತಹ ಪಹಣಿ ಸಹ ಪ್ರಿಂಟ್ ಮಾಡಬಹುದಾಗಿದೆ.

District Court Recruitment 2024 | ಜಿಲ್ಲಾ ನ್ಯಾಯಾಲಯದಲ್ಲಿ 41 ಖಾಲಿ ಹುದ್ದೆಗಳ ಭರ್ತಿ

Omron Healthcare Scholarship 2024 | ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದರೆ 20,000 ನೇರ ಖಾತೆಗೆ

Leave A Reply
rtgh