Yuva : ಯುವ ಸಬಲೀಕರಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 10 ಸಾವಿರ!
ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ವಿದ್ಯಾರ್ಥಿವೇತನಕ್ಕೆ ಅರ್ಹತೆಗಳು, ದಾಖಲೆಗಳು ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
2023-24 ನೇ ಸಾಲಿಗೆ ಯುವ ಸಬಲೀಕರಣ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆ ಅಡಿ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (6ನೇ ತರಗತಿಯಿಂದ 10ನೇ ತರಗತಿಯವರೆಗೆ) ವಾರ್ಷಿಕ ರೂ. 10,000 ಗಳಂತೆ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ, ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ಅರ್ಹತೆಗಳು:
- 2023-24ನೇ ಸಾಲಿನಲ್ಲಿ ಪ್ರಸ್ತುತ ದಿನಗಳಲ್ಲಿ 6 ರಿಂದ 10ನೇ ತರಗತಿ ಶಿಕ್ಷಣವನ್ನು ಪಡೆಯುತ್ತಿರಬೇಕು.
- ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿರಬೇಕಾಗುತ್ತದೆ.
- ಈ ಎರಡು ರೀತಿಯ ಅರ್ಹತೆ ಹೊಂದಿದಂತಹ ವಿದ್ಯಾರ್ಥಿಗಳಿಗೆ 10,000 ಹಣವು ಕೂಡ ಕ್ರೀಡಾಕೂಟದಿಂದ ದೊರೆಯಲಿದೆ.
ಅಗತ್ಯ ದಾಖಲೆಗಳು:
- ಕ್ರೀಡಾ ಸಾಧನೆಯ ಪ್ರಮಾಣಪತ್ರಗಳು
- ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ/ರದ್ದಾದ ಚೆಕ್
- ಅಧ್ಯಯನ ಪ್ರಮಾಣಪತ್ರ
- ಅರ್ಜಿ ಶುಲ್ಕ: ಇರುವುದಿಲ್ಲ
- ಸೇವಾ ಶುಲ್ಕ (ಗ್ರಾಮ ಒನ್| ಬಿ1| ಕೆ1) : ₹40
- ಸೇವಾ ಸಮಯ (ದಿನಗಳು) : ಇರುವುದಿಲ್ಲ
ಇದನ್ನೂ ಸಹ ಓದಿ: Raman : ಪ್ರತಿಯೊಬ್ಬ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಲಿದೆ ₹40,000 ರಿಂದ ₹5,50,000!
ಪ್ರಯೋಜನಗಳು:
₹10,000/- ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
30-06-2024
ಅರ್ಜಿ ಪ್ರಕ್ರಿಯೆ:
- ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹ ಕ್ರೀಡಾಪಟುಗಳು ಇಲಾಖೆಯ ಅಧಿಕೃತ ಜಾಲತಾಣ https://sevasindhuservices.karnataka.gov.in/ ಮೂಲಕ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು.
- ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಗೇಟ್ ನಂ.12, ಕೊಠಡಿ ಸಂಖ್ಯೆ 17-18, ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಂಗಳೂರು-560001, ದೂರವಾಣಿ ಸಂಖ್ಯೆ-080-22239771 ಮೂಲಕ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಲಿಂಕ್‌ಗಳು:
ಕ್ರೀಡಾ ವಿದ್ಯಾರ್ಥಿವೇತನ ಅಪ್ಲೇ ಆನ್ಲೈನ್ | Click Here |
ಇತರೆ ವಿಷಯಗಳು:
BSF : BSF ಹೆಡ್ ಕಾನ್ಸ್ಟೇಬಲ್ 1526 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ