Daarideepa

Drone Pilot Training | 15 ದಿನಗಳ ಕಾಲ ವಸತಿ ಸಹಿತ ಉಚಿತ ತರಬೇತಿ

0

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಡ್ರೋನ್ ನಿರ್ವಹಣೆಯ ಮೂಲಕ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಜನರಿಗೆ ನೆರವಾಗಲು ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ‘ಡ್ರೋನ್ ಪೈಲಟ್’ ತರಬೇತಿ ನೀಡಲಾಗುತ್ತಿದೆ. ನೀವು ಉಚಿತವಾಗಿ ಡ್ರೋನ್ ಪೈಲಟ್ ತರಬೇತಿಯನ್ನು ಪಡೆಯಲು ಬಯಸಿದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Drone Pilot Training

ಈ ಯೋಜನೆಯಡಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ 15 ದಿನಗಳ ಕಾಲ ವಸತಿ ಸಹಿತ ತರಬೇತಿಯನ್ನು ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿತರಿಸಲಾಗುತ್ತದೆ.

ಈ ಉಚಿತ ಡ್ರೋನ್ ಪೈಲಟ್ ತರಬೇತಿಗೆ ಮೊದಲ ಹಂತದಲ್ಲೇ 1,248 ಜನರು ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿ, ವಿಡಿಯೋಗ್ರಫಿ, ಕೃಷಿ, ಗಣಿ, ಲಾಜಿಸ್ಟಿಕ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಡ್ರೋನ್ ಗಳು ಬಳಕೆಯಾಗುತ್ತಿರುವುದರಿಂದ ಉದ್ಯೋಗವಕಾಶಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಡ್ರೋನ್ ನಿರ್ವಹಣೆಯ ತರಬೇತಿ ನೀಡುವ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಡ್ರೋನ್ ಪೈಲಟ್ ತರಬೇತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಸೇರಿ ಒಟ್ಟು 5 ಸಾವಿರ ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಆಗಸ್ಟ್​​ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, 10th ಪಾಸ್‌ ಆಗಿರುವ 18 ರಿಂದ 65 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿ ತರಬೇತಿಯನ್ನು ಪಡೆಯಲು ಬಯಸಿದರೆ ಲಿಂಕ್‌ ಅನ್ನು ಕೆಳಗೆ ನೀಡಲಾಗಿದೆ. ಈ ಲಿಂಕ್‌ ಮೂಲಕ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Related Posts

PM Electric Vehicle ಯೋಜನೆ…!

Drone Pilot Training

ಇತರೆ ವಿಷಯಗಳು

HP Recruitment 2024 | ಮನೆಯಲ್ಲೇ ಪ್ರತಿ ತಿಂಗಳು 13-16 ಸಾವಿರ ಪಡೆಯಿರಿ

SSC Recruitment 2024 : 2000+ ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ


Leave A Reply
rtgh