Daarideepa

15 lakh : 749 ರೂಪಾಯಿ ಪ್ರೀಮಿಯಂಗೆ ಸಿಗುತ್ತೆ 15 ಲಕ್ಷ!

0

ಅಂಚೆ ಇಲಾಖೆಯ ಸಮಗ್ರ ರಕ್ಷಣಾ ಯೋಜನೆ:

ಭಾರತೀಯ ಅಂಚೆ ಇಲಾಖೆಯು ಕೇವಲ ಪೋಸ್ಟ್‌ ಸೇವೆಗಳಿಗಷ್ಟೆ ಸೀಮಿತವಾಗಿ ನಿಂತಿಲ್ಲ. ತನ್ನ ಗ್ರಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆಯೇ ವಿವಿಧ ಸೇವೆಗಳನ್ನು ನೀಡುತ್ತಲೇ ಬಂದಿದೆ. ವಿಮೆ, ಸೇವಿಂಗ್ಸ್‌, ಆಧಾರ್‌ ತಿದ್ದುಪಡಿ ಹೀಗೆ 10 ಹಲವು ಸೇವೆಯನ್ನು ನೀಡುತ್ತಾ ಜನರಿಗೆ ತುಂಬ ಹತ್ತಿರವಾಗಿದೆ.

Accident Insurance

ಇಷ್ಟೇ ಅಲ್ಲದೆ, ಆದಿತ್ಯ ಬಿರ್ಲಾ ಕ್ಯಾಪಿಟಲ್‌ ಸಹಯೋಗದೊಂದಿಗೆ ಕಡಿಮೆಯ ದರದಲ್ಲಿ ಪ್ರೀಮಿಯಂ ಮೇಲೆ ಅಪಘಾತ ವಿಮೆಯನ್ನು ಪರಿಚಯ ಮಾಡಿದೆ. ಕೇವಲ ರಸ್ತೆಯ ಅಪಘಾತ ಒಂದೆ ಅಲ್ಲದೆ ಜಾರಿ ಬಿದ್ದು ಗಾಯಗೊಂಡರೆ, ಅಗ್ನಿ ಅವಘಡ, ಹಾವು ಕಡಿತ, ವಿದ್ಯುತ್ ಆಘಾತ ಇತ್ಯಾದಿ ಅಪಘಾತಗಳಿಗೂ ಈ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆಯನ್ನು ಬಳಸಬಹುದಾಗಿದೆ.

ಕಡಿಮೆ ದರದ ಪ್ರೀಮಿಯಂ!

ಇದರಲ್ಲಿ 2 ನಮೂನೆಯ ಅಪಘಾತ ವಿಮೆಯನ್ನು ಅಂಚೆ ಇಲಾಖೆಯಲ್ಲಿ ಪರಿಚಯ ಮಾಡಿದೆ.

  • ಮೊದಲನೆಯದಾಗಿ 15 ಲಕ್ಷ ರೂ. ವಿಮೆಯಾಗಿದ್ದು, ಇದಕ್ಕೆ ವಾರ್ಷಿಕ ಕೇವಲ 749 ರೂ. ಪಾವತಿಸಿದರೆ ಸಾಕು.
  • ಇನ್ನೊಂದು ವಿಮೆ 10 ಲಕ್ಷ ರೂ. ಆಗಿದ್ದು, ಇದಕ್ಕೆ ವಾರ್ಷಿಕ ಪ್ರೀಮಿಯಂ ಆಗಿ 549 ರೂ. ಪಾವತಿಸಬೇಕಾಗುತ್ತದೆ.

ಯಾವುದಕ್ಕೆ ಎಷ್ಟು? 

  • ಅಪಘಾತದಲ್ಲಿ ಮೃತಪಟ್ಟರೆ:

ವಿಮಾದಾರನು ಅಪಘಾತದಲ್ಲಿ ಮೃತಪಟ್ಟರೆ ಸಂಪೂರ್ಣ ವಿಮಾ ಮೊತ್ತ ಸಿಗುತ್ತದೆ.

  • ಶಾಶ್ವತ ಸಂಪೂರ್ಣ ವೈಕಲ್ಯ:

ಅಪಘಾತದಲ್ಲಿ ಅಂಗವಿಕಲರಾದರೆ ಅಂತವರಿಗೆ, ಸಂಪೂರ್ಣ ವಿಮಾ ಮೊತ್ತವನ್ನು ನೀಡಲಾಗುತ್ತದೆ.

  • ಶಾಶ್ವತ ಭಾಗಶಃ ವೈಕಲ್ಯ:

ಅಪಘಾತದಲ್ಲಿ ಅಂಗವಿಕಲರಾದರೆ ಅಂತವರಿಗೆ, ಸಂಪೂರ್ಣ ವಿಮಾ ಮೊತ್ತವನ್ನು ನೀಡಲಾಗುತ್ತದೆ.

  • ಶಿಕ್ಷಣ ನಿಧಿ:

ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ (ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಠ 2 ಲಕ್ಷ ರೂ.).

  • ಒಳರೋಗಿ ವೆಚ್ಚ:

ಅವಘಡಕ್ಕೆ ಸಿಲುಕಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದರೆ 60 ಸಾವಿರ ರೂ. ಕವರೇಜ್‌ ಸಿಗುತ್ತದೆ.

  • ಆಕಸ್ಮಿಕ ಆಸ್ಪತ್ರೆ ನಗದು:

ಆಸ್ಪತ್ರೆಯಲ್ಲಿ ದಾಖಲಾದರೆ ದಿನಕ್ಕೆ 1,000 ರೂಪಾಯಿಗಳಂತೆ 10 ದಿನಗಳ ವರೆಗೆ ವಿಮೆಯನ್ನು ಪಾವತಿಸಲಾಗುತ್ತದೆ.

  • ಹೊರರೋಗಿ ವೆಚ್ಚ:

ಓಪಿಡಿ ವೆಚ್ಚಕ್ಕೆಂದು 30,000 ಸಾವಿರ ರೂ. ಹಣ ಸಿಗಲಿದೆ.

  • ಅಂತಿಮ ಸಂಸ್ಕಾರದ ನೆರವು:

ಮೃತಪಟ್ಟರೆ ಅಂತಹ ವಿಮಾದಾರನ ಅಂತಿಮ ಸಂಸ್ಕಾರದ ನೆರವು ರೂಪದಲ್ಲಿ 5ಸಾವಿರ ರೂಪಾಯಿ ಕವರೇಜ್‌ ಸಿಗಲಿದೆ

18 ರಿಂದ 65 ವರ್ಷದ ವಯಸ್ಸಿನ ಯಾವುದೇ ವ್ಯಕ್ತಿಯು ಈ ಅಪಘಾತದ ವಿಮೆಯನ್ನು ಸ್ಥಳೀಯ ಅಂಚೆ ಕಚೇರಿಗಳಿಗೆ ತೆರಳಿ ಮಾಡಬಹುದಾಗಿದೆ.

ಇತರೆ ವಿಷಯಗಳು:

Guest Teacher Recruitment 2024 | 35,000 ಅತಿಥಿ ಶಿಕ್ಷಕರ ಹುದ್ದೆಗಳಿಗೆ ಭರ್ಜರಿ ನೇಮಕಾತಿ

ನೋಟು ಪೇಪರ್‌ ಮಿಲ್‌ Mysore recruitment 2024 ಖಾಲಿ ಹುದ್ದೆಗಳ ಭರ್ತಿ

Leave A Reply
rtgh