Udyog Aadhaar Card:ಯಾವುದೇ ದಾಖಲೆಗಳಿಲ್ಲದೆ, ಉದ್ಯೋಗ್ ಆಧಾರ್ ನಿಂದ ಲೊನ್ ಪಡೆಯಿರಿ..!
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಆಧಾರ್ ಕಾರ್ಡ್ ಬಗ್ಗೆ ಬಹುಶಃ ಎಲ್ಲರಿಗೂ ಗೊತ್ತಿರುವಂಥದ್ದೇ. ಬಹುತೇಕ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿದ್ದೇವೆ. ಇದೊಂದು ರೀತಿಯಲ್ಲಿ ಭಾರತೀಯರ ಗುರುತಿನ ಚೀಟಿಯಾಗಿದೆ. ಸರಕಾರದ ಕೆಲ ಯೋಜನೆಗಳಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ.
ಆಧಾರ್ ಕಾರ್ಡ್‌ನಂತೆ ಬಾಲ್ ಆಧಾರ್ (ಮಕ್ಕಳಿಗೆ ಮಾಡಿಸುವ ಆಧಾರ್ ಕಾರ್ಡ್) ಕೂಡ ಅಸ್ತಿತ್ವದಲ್ಲಿದೆ. ಹಾಗೆಯೇ, ಉದ್ಯೋಗ್ ಆಧಾರ್ ಬಗ್ಗೆ ನಿಮಗೆ ಮಾಹಿತಿ ಇದೆಯಾ? ಏನಿದು ಉದ್ಯೋಗ ಆಧಾರ್? ಯಾಕಾಗಿ ಇದು ಇದೆ? ಉದ್ಯೋಗ ಆಧಾರ್ ಯಾರು ಮಾಡಿಸಬೇಕು? ಅದರಿಂದ ಪ್ರಯೋಜನಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.
ಉದ್ಯೋಗ್ ಆಧಾರ್ ಏನು?
ಉದ್ಯೋಗ್ ಆಧಾರ್ ಎಂಬುದು ಸಣ್ಣ ವ್ಯವಹಾರ ವಲಯದ ಸಂಸ್ಥೆಗಳಿಗೆ ಕೊಡಲಾಗುವ ಯೂನಿಕ್ ಐಡೆಂಟಿಫಿಕೇಶನ್ ನಂಬರ್ (ಯುಐಎನ್) ಆಗಿದೆ. ಎಂಎಸ್‌ಎಂಇ ಸಚಿವಾಲಯದಿಂದ ಇದನ್ನು ಒದಗಿಸಲಾಗುತ್ತದೆ. 12 ಅಂಕಿಯ ಈ ಯುಐಎನ್ ಅನ್ನು ಎಂಎಸ್‌ಎಂಇಗಳಿಗೆ ನೀಡಲಾಗುತ್ತದೆ.
ಸದ್ಯ ಉದ್ಯೋಗ್ ಆಧಾರ್ ಹೆಸರನ್ನು ಉದ್ಯಮ್ ಎಂದು ಬದಲಾಯಿಸಲಾಗಿದೆ. ಹೊಸ MSMEಗಳು ಉದ್ಯಮ್ ನೊಂದಣಿ ಪೋರ್ಟಲ್‌ನಲ್ಲಿ ಅರ್ಜಿ ಅನ್ನು ಸಲ್ಲಿಸಿ 1 ಪ್ರಮಾಣಪತ್ರವನ್ನು ಪಡೆಯಬಹುದು.
ಉದ್ಯೋಗ್ ಆಧಾರ್‌ನಿಂದ ಅನುಕೂಲ
* ನಿಮ್ಮ ಸಂಸ್ಥೆಯನ್ನು ಎಂಎಸ್‌ಎಂಇ ಆಗಿ ನೊಂದಾಯಿಸುವ ಪ್ರಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ.
* ಸ್ವಘೋಷಣೆ ಸೌಲಭ್ಯ
* ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ
* ಸರಕಾರದ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ
* ಒಂದಕ್ಕಿಂತ ಹೆಚ್ಚು ಉದ್ಯೋಗ್ ಆಧಾರ್ ಅರ್ಜಿಗಳನ್ನು ಸಲ್ಲಿಸಬಹುದು.
ಇದನ್ನೂ ಸಹ ಓದಿ: HP Recruitment 2024 | ಮನೆಯಲ್ಲೇ ಪ್ರತಿ ತಿಂಗಳು 13-16 ಸಾವಿರ ಪಡೆಯಿರಿ
ಉದ್ಯೋಗ್ ಆಧಾರ್‌ಗೆ ಬೇಕಿರುವ ದಾಖಲೆಗಳು
* ಆಧಾರ್ ನಂಬರ್
* ಎಂಎಸ್‌ಎಂಇ ಮಾಲೀಕರ ಹೆಸರು
* ಅರ್ಜಿದಾರರ ವಿಭಾಗ
* ವ್ಯವಹಾರದ ಹೆಸರು
* ಸಂಸ್ಥೆಯ ಹೆಸರು
* ಬ್ಯಾಂಕ್ ವಿವರ
* ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಶನ್ ಕೋಡ್
* ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ
* ಡಿಸ್ಟ್ರಿಕ್ಟ್ ಇಂಡಸ್ಟ್ರಿ ಸೆಂಟರ್‌ನ ವಿವರ
* ಯಾವಾಗಿನಿಂದ ಸಂಸ್ಥೆ ಆರಂಭ
ಉದ್ಯೋಗ್ ಆಧಾರ್ ಪಡೆಯುವುದು ಹೇಗೆ?
- ಉದ್ಯೋಗ್ ಆಧಾರ್ಗೆ ನೋಂದಾಣಿ ಮಾಡಲು ನಿಮಗೆ ಆಧಾರ್ ಕಾರ್ಡ್ ಅಗತ್ಯ.
- ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಬೇಟಿ ನೀಡಿ ಲಾಗಿನ್ ಮಾಡಿಕೊಂಡು, ಆಧಾರ್ ಕಾರ್ಡ್ ನ ವಿವರವನ್ನು ತುಂಬಿರಿ.
- ನಂತರ ಬಾಕ್ಸ್ ಅನ್ನು ಚೆಕ್ ಮಾಡಿ, “ವ್ಯಾಲಿಡೇಟ್ ಅಂಡ್ ಜನರೇಟ್ ಒಟಿಪಿ” ಅನ್ನು ಕ್ಲಿಕ್ ಮಾಡಿ.
- OTP ಅನ್ನು ಹಾಕಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಇನ್ನೊಂದು ಪುಟದಲ್ಲಿ ಫಾರ್ಮ್ ತೆರೆದುಕೊಳ್ಳುತ್ತದೆ.
- ಆ ಫಾರ್ಮ್‌ನಲ್ಲಿ ಅಗತ್ಯವಾದ ಮಾಹಿತಿಯನ್ನು ತುಂಬಿ, ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
- ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್‌ಗೆ OTP ಬರುತ್ತದೆ. ಒಟಿಪಿ ಅನ್ನು ಹಾಕಿ ಕೊನೆಯದಾಗಿ ‘ಸಬ್ಮಿಟ್’ ಬಟನ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಕೆಯು ಪೂರ್ಣವಾದಂತೆ.
ಕಾರ್ಡ್ ಪಡೆಯಲು ಕ್ಲಿಕ್ ಮಾಡಿ (Apply Here)
ಇತರೆ ವಿಷಯಗಳು:
Trip : ಅಯೋಧ್ಯೆ & ಕಾಶಿ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ವಿಶೇಷ ಸಬ್ಸಿಡಿ ಟೂರ್ ಪ್ಯಾಕೇಜ್!